ನಾ ಕಂಡೆ ನಿನ್ನ ಕಣ್ಣಂಚು
ಹೊಳೆಯಿತಲ್ಲೊಂದು ಮಿಂಚು
ಸರಿದರೆ ನಿನ್ನ ಸನಿಹ
ಕಂಡೆನು ಕಣ್ಣ ಹನಿಯ
ಅದೇಕೋ ಕದಡಿತ್ತು ನಿನ್ನ ಮನವು
ಅದೇನೆಂದು ಅರಿಯದು ನನ್ನ ಮನವು
ಬಿಡಿಸಿ ಹೇಳಬಾರದೇ ಬಂದು ಸನಿಹ
ತರಲೇನು ನಿನಗೆ ಜೇನ ಹನಿಯ
ತೋರು ನಿನ್ನ ಮೊಗವ, ಬೀರು ನಿನ್ನ ನಗುವ
ಬಾಚಿ ತರುವೆನು ನಿನಗೆ ಬೇಕು-ಬೇಡವ
ನಾನಿಲ್ಲೇ ಇಲ್ಲವೇ ನಿನ್ನ ಸನಿಹ
ಒರೆಸಲು ನಿನ್ನ ಕಣ್ಣ ಹನಿಯ
- ಶರಣು ಗೋಗಿ