ಅರ್ಥಕ್ಕೆ ನಿಲುಕದ್ದು,
ಅಕ್ಷರಕ್ಕೆ ಸಿಗಲಾರದ್ದು,
ಅಷ್ಟೋತ್ತರಗಳಲ್ಲಿ ವಿವರಿಸಲಾರದ್ದು,
ಅಮೃತವೇ ಸರಿ, ಈ ಅಮ್ಮ ಎಂಬ ಸಿರಿ...
ಮಮತೆಯ ಮಾಣಿಕ್ಯಗಿರಿ,
ಕಾರುಣ್ಯದ ತಾರುಣ್ಯಗಿರಿ,
ಪ್ರೀತಿಯ ಪರಮೋನ್ನತ ಗಿರಿ,
ಅಮೃತವೇ ಸರಿ, ಈ ಅಮ್ಮ ಎಂಬ ಸಿರಿ...
ಪ್ರತಿ ಜೀವಕ್ಕೂ ಆದಿ,
ಜೀವನಕ್ಕೆ ಹಾಲುಹಾದಿ,
ನೀ ನಕ್ಕರದೇ ಯಾಗಾದಿ,
ಅಮೃತವೇ ಸರಿ, ಈ ಅಮ್ಮ ಎಂಬ ಸಿರಿ...
- ಸತ್ಯಪ್ರೀಯ