ಕರುಣೆಯಿಲ್ಲದ ವಿಧಿ ನಿನ್ನ ಕಾಲಡಿಯಲ್ಲಿ
ನೊಂದಿಹೆ ನಾ...
ಕನಸುಗಳಿಲ್ಲದ ಮನಸಿಗೆ ಇಂದು ಮೂಕ
ಸಾಕ್ಷಿಯ ನಯನ ನಾ...
ಬಲಿಷ್ಠ ಮುಖವಾಡದ ಸೋಗಿನಲಿ
ಬಳಲುತಿಹ ಅಶಕ್ತ ಆತ್ಮ ನಾ...
ನಗುಮೊಗದ ನೆರಳಿನಲಿ ನಿತ್ಯ ನರಳುತಿಹ
ಮನಸು ನಾ...
ನೂರು ಸಾಂತ್ವನದ ಬುತ್ತಿಯಡಿಯಲ್ಲಿನ
ಸಂಕಷ್ಟದ ಛಾಯೆ ನಾ...
ಸಹಸ್ರ ಬಂಧುಗಳ ಬಿಡಾರದಲ್ಲಿಯೂ
ಅನಾಥ ಪ್ರಜ್ಞೆಯ ಅನುಭವಿ ನಾ...
-ಸತ್ಯಪ್ರೀಯ