ನೂರು ಕನಸ ಹುಡುಕಿ ಹೊರಟ ಮನವು ಒಂಟಿಯಾಯಿತು
ಕಾಣದೂರಿನಲ್ಲಿ ಕೆಲಸವೊಂದೇ ಜೊತೆಯು ನೀಡಿತು
ಕಾಣದೂರಿನಲ್ಲಿ ಕೆಲಸವೊಂದೇ ಜೊತೆಯು ನೀಡಿತು
ಕಾರ್ಯಸ್ಥಳದಲ್ಲಿಯ ಹಗೆಯು ಮನದ ಶಾಂತಿ ಕದಡಿತು
ಮತ್ತೆ ಒಲುಮೆ ಆಸರೆಯನು ಮನವು ಅರಸಿ ಹೊರಟಿತು
ಮತ್ತೆ ಒಲುಮೆ ಆಸರೆಯನು ಮನವು ಅರಸಿ ಹೊರಟಿತು
ಸ್ನೇಹವೆಂಬ ಪರಿಧಿಯಲ್ಲಿ ನಿನ್ನ ಪರಿಚಯವಾಯಿತು
ಮರಳುಗಾಡಿನಲ್ಲಿ ಚಿಲುಮೆ ಕಂಡ ಅನುಭವವಾಯಿತು
ಮರಳುಗಾಡಿನಲ್ಲಿ ಚಿಲುಮೆ ಕಂಡ ಅನುಭವವಾಯಿತು
ಅಂದಿನಿಂದ ದಿನದ ಮೊದಲು ಕೊನೆಯು ನೀನೆ ಆಯಿತು
ಕಷ್ಟದಲ್ಲಿ ಕರವ ಪಿಡಿದ ನಿನ್ನ ಒಲವು ಮಾಗಿತು
ಕಷ್ಟದಲ್ಲಿ ಕರವ ಪಿಡಿದ ನಿನ್ನ ಒಲವು ಮಾಗಿತು
ಅನವರತವು ಮನಸು ನಿನ್ನ ಅನುಸರಿಸುತ ಅಲೆಯಿತು
ಪ್ರೀತಿಯಲೆಮಾರಿಯಾಗಿ ನಾನು ಬದಲಾದೆನಾ ಎನಿಸಿತು
ಪ್ರೀತಿಯಲೆಮಾರಿಯಾಗಿ ನಾನು ಬದಲಾದೆನಾ ಎನಿಸಿತು
ಪ್ರತಿದಿನದ ಪ್ರತಿಕ್ಷಣವೂ ನಿನ್ನ ಸಂಗ ಮನವ ಕರೆಯಿತು
ನೀನಿಲ್ಲದ ಅರೆಕ್ಷಣವೇ ಕಾಲನ ಕರೆ ನನ್ನ ಸೆಳೆಯಿತು.
ನೀನಿಲ್ಲದ ಅರೆಕ್ಷಣವೇ ಕಾಲನ ಕರೆ ನನ್ನ ಸೆಳೆಯಿತು.
- ಸತ್ಯಪ್ರೀಯ