ಸಸ್ಯದ ಲಕ್ಷಣಗಳನ್ನು ಪ್ರಯೋಗದ ಮೂಲಕ ತಿಳಿಯುವುದು ಹೇಗೆ

ಸಸ್ಯಗಳನ್ನು ಲಕ್ಷಣಗಳನ್ನು ಪ್ರಾಯೋಗಿಕವಾಗಿ ತಿಳಿಯಿರಿ

ಸಸ್ಯದ ಲಕ್ಷಣಗಳನ್ನು ಪ್ರಯೋಗದ ಮೂಲಕ ತಿಳಿಯುವುದು ಹೇಗೆ?

ಈ ಪ್ರಯೋಗದಲ್ಲಿ ನೀವು ಸಸ್ಯದ ಲಕ್ಷಣಗಳನ್ನು ಕುರಿತು ಪ್ರಾಯೋಗಿಕವಾಗಿ ತಿಳಿಯುವಿರಿ. ಈ ಪ್ರಯೋಗವನ್ನು ಪೂರ್ತಿಯಾಗಿ ಮುಗಿಸಲು ನೀವು ಒಂದು ದಿನ ಕಾಯಬೇಕಾಗುವುದು.

ಈ ಪ್ರಯೋಗವನ್ನು 4ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿರುವ ಸಸ್ಯಗಳನ್ನು ಬಳಸಿಕೊಂಡು ಮಾಡಬಹುದಾಗಿದೆ.

ಉದ್ದೇಶ : 

ಸಸ್ಯದ ಲಕ್ಷಣಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸುವುದು.

ಅಗತ್ಯ ಸಾಮಗ್ರಿಗಳು :

  • ನೋಟ್ ಪುಸ್ತಕ & ಪೆನ್ನು
  • ಸಂಬಂಧಿಸಿದ ಸಸ್ಯದ ಎಲೆಗಳು
  • ಹೂವುಗಳು, ಬೀಜಗಳು
  • ಉದುರಿದ ಎಲೆ ಹಾಗೂ ತೊಗಟೆಗಳು
  • ಪ್ಲ್ಲಾಸ್ಟಿಕ್ ಬ್ಯಾಗ್

ವಿಧಾನ :

ಮೊದಲು ನಿಮ್ಮ ಮನೆಯ ಹತ್ತಿರದ ಸಸ್ಯವೋಂದನ್ನು ಆರಿಸಿಕೋಳ್ಳಿ. ಅದರ ಹೆಸರೇನೆಂಬುದನ್ನು ನಿಮ್ಮ ನೋಟ್ ಪುಸ್ತಕದಲ್ಲಿ ಬರೆದುಕೊಳ್ಳಿ. ಈಗ ಆ ಸಸ್ಯದ ನಾಲ್ಕಾರು ಎಲೆಗಳಿರುವ ರೆಂಬೆಗೆ ಒಂದು ಪ್ಲ್ಲಾಸ್ಟಿಕ್ ಬ್ಯಾಗನ್ನು ಗಾಳಿಯಾಡದಂತೆ ಬಿಗಿಯಾಗಿ ಕಟ್ಟಿರಿ.

  • ಈಗ ಆ ಸಸ್ಯವನ್ನು ಒಂದು ದಿನದ ಬಳಿಕ ಗಮನಿಸಿ.
  • ಅದರ ಹೂವು ಹಾಗೂ ಬೀಜಗಳನ್ನು ಗಮನಿಸಿ.
  • ಆ ಸಸ್ಯದ ಉದುರಿದ ಎಲೆ ಹಾಗೂ ತೊಗಟೆಗಳನ್ನು ಗಮನಿಸಿ.
  • ಒಂದು ದಿನದ ನಂತರ ನೀನು ಆ ಸಸ್ಯದ ರೆಂಬೆಗೆ ಕಟ್ಟಿದ ಪ್ಲ್ಲಾಸ್ಟಿಕ್ ಬ್ಯಾಗ್ ಅನ್ನು ಬಿಚ್ಚಿ
  • ಅದರಲ್ಲಾದ ಬದಲಾವಣೆಗಳನ್ನು ಗಮನಿಸಿ.

ಈ ಪ್ರಯೋಗವನ್ನು ಈ ಕೆಳಗಿನ ವೀಡಿಯೊ ದಲ್ಲಿ ನೋಡಿ ಇನ್ನಷ್ಟು ತಿಳಿಯಿರಿ:

 

ತೀರ್ಮಾನ:

  • ಅದರ ಹೂವು ಆ ಸಸ್ಯದ ಬೀಜಗಳನ್ನು ಸೃಷ್ಟಿ ಮಾಡುವ ಭಾಗ. ಆ ಸಸ್ಯದ ಬೀಜವನ್ನು ಬಿತ್ತಿದಾಗ ಅಂತಹುದೇ ಮತ್ತೊಂದು ಸಸ್ಯ ಹುಟ್ಟುತ್ತದೆ.
  • ಉದುರಿದ ಎಲೆ ಹಾಗೂ ತೊಗಟೆಗಳು ಆ ಸಸ್ಯಕ್ಕೆ ಬೇಡವಾದ ವಸ್ತುಗಳು.
  • ಪ್ಲ್ಲಾಸ್ಟಿಕ್ ಬ್ಯಾಗನ್ನು ಒಳಭಾಗದಲ್ಲಿ ನೀರಿನ ಹನಿಗಳು ಮೂಡಿರುತ್ತವೆ. ಇದರಿಂದ ಸಸ್ಯಗಳು ಹೆಚ್ಚಿನ ನೀರನ್ನು ಎಲೆಗಳ ಮುಖಾಂತರ ವಾತವರಣಕ್ಕೆ ಬಿಡುಗಡೆ ಮಾಡುತ್ತವೆ.

Post a Comment (0)
Previous Post Next Post