SSLC ವಿದ್ಯಾರ್ಥಿಗಳೇ, ಪರೀಕ್ಷಾ ತಯಾರಿಗಾಗಿ ನಿಮ್ಮ ಪ್ರತಿನಿತ್ಯದ ಓದಿನ ವೇಳಾಪಟ್ಟಿ ಹೀಗಿರಲಿ...

ಹತ್ತನೇ ತರಗತಿಯ ಪರೀಕ್ಷಾ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರತಿನಿತ್ಯ ವ್ಯವಸ್ಥಿತವಾಗಿ ಅಭ್ಯಾಸ ಮಾಡಲು ಅನುಕೂಲವಾಗಲೆಂದು ಈ ವೇಳಾಪಟ್ಟಿಯನ್ನು ತಯಾರಿಸಲಾಗಿದೆ.

ವಿದ್ಯಾರ್ಥಿಗಳು ಈ ವೇಳಾಪಟ್ಟಿಯಂತೆ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಅವರು ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

SSLC ವಿದ್ಯಾರ್ಥಿಗಳೇ, ಪರೀಕ್ಷಾ ತಯಾರಿಗಾಗಿ ನಿಮ್ಮ ಪ್ರತಿನಿತ್ಯದ ಓದಿನ ವೇಳಾಪಟ್ಟಿ ಹೀಗಿರಲಿ...

ಮೊದಲು ಈ ಕೆಳಗೆ ತಿಳಿಸಿರುವ ವೇಳಾಪಟ್ಟಿಯನ್ನು ನೀವು ಗಮನಿಸಿ, ನಂತರ ಡ್ರಾಯಿಂಗ್ ಸೀಟ್‌ನಲ್ಲಿ ಬಣ್ಣದ ಪೆನ್ನುಗಳಿಂದ ದೊಡ್ಡದಾದ ಅಕ್ಷರಗಳಲ್ಲಿ ಬರೆಯಬೇಕು. ಕೆಲವರಿಗೆ ಈ ವೇಳಾಪಟ್ಟಿಯ ಪ್ರಕಾರ ಏಕೆ ಓದಬೇಕು ಮತ್ತು ಇದನ್ನು ಬದಲಾವಣೆ ಮಾಡಿಕೊಳ್ಳುವ ಯೋಚನೆ ಬಂದರೆ, ನಿಮಗೆ ಅನುಕೂಲವಾಗುವಂತೆ ವಿಷಯಗಳು ಮತ್ತು ಸಮಯವನ್ನು ಬದಲಾಯಿಸಿಕೊಂಡು, ಆ ನಿಮ್ಮ ವೇಳಾಪಟ್ಟಿಯಂತೆ ಓದಿಕೊಳ್ಳಿ. ಇದರಿಂದ ನಿಮಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಈ ವೇಳಾಪಟ್ಟಿಯನ್ನು ಸಾಧನೆ ಮಾಡಿದ ನಾನಾ ಹಿರಿಯರೊಂದಿಗೆ ಚರ್ಚಿಸಿ ರಚಿಸಲಾಗಿದೆ. ಸಾಧ್ಯವಾದಷ್ಟು ಬದಲಾಯಿಸದೇ ಓದಿದರೆ ಉತ್ತಮ, ನಂತರ ಡ್ರಾಯಿಂಗ್ ಸೀಟ್‌ನಲ್ಲಿ ಬರೆದಿರುವ ವೇಳಾಪಟ್ಟಿಯನ್ನು ನೀವು ಮಲಗುವ ಕೋಣೆಯಲ್ಲಿ ನಿಮಗೆ ಕಾಣುವಂತೆ ಗೋಡೆಗೆ ನೇತು ಹಾಕಿ. ದಿನನಿತ್ಯ ಈ ವೇಳಾಪಟ್ಟಿಯಂತೆ ನಿಮ್ಮ ಓದಿನ ಅಭ್ಯಾಸ ಮಾಡಬೇಕು.

Related: SSLC ಪರೀಕ್ಷಾ ತಯಾರಿಗಾಗಿ ರಚಿಸಲಾಗಿರುವ ಸಂಪೂರ್ಣ ಅಭ್ಯಾಸ ಸಾಮಗ್ರಿ

10ನೇ ತರಗತಿಯಲ್ಲಿ ಆರು ವಿಷಯಗಳು ಇವೆ, ಇದರಲ್ಲಿ ಯಾವ ವಿಷಯವನ್ನು ಯಾವಾಗ ಅಭ್ಯಾಸ ಮಾಡಬೇಕೆಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ. ಈ ರೀತಿಯಾಗಿ ಅಭ್ಯಾಸ ಮಾಡಿ, ಇಲ್ಲಾ ನಿಮಗೆ ಅನುಕೂಲವಾಗುವಂತೆ ವೇಳಾ ಪಟ್ಟಿಯನ್ನು ರಚಿಸಿಕೊಂಡು ಅಭ್ಯಾಸ ಮಾಡಿ.

ಪರೀಕ್ಷಾ ತಯಾರಿಗಾಗಿ ನಿಮ್ಮ ಪ್ರತಿನಿತ್ಯದ ಓದಿನ ವೇಳಾಪಟ್ಟಿ ಹೀಗಿರಲಿ...

ನೀವು ಬೆಳಿಗ್ಗೆ 4.00 ಗಂಟೆಗೆ ಎದ್ದೇಳಬೇಕು. ಒಂದು ವೇಳೆ ನಿಮಗೆ ಬೆಳಿಗ್ಗೆ ಎದ್ದೇಳಲು ಆಗದಿದ್ದರೆ, ನಿಮ್ಮ ಮನೆಯವರಿಗೆ ತಿಳಿಸಿ ಅಥವಾ ಗಡಿಯಾರದ ಅಲಾರಾಮ್‌ನ್ನು ಇಟ್ಟುಕೊಂಡು ಬೆಳಿಗ್ಗೆ ಎದ್ದೇಳುವ ಅಭ್ಯಾಸ ಮಾಡಿಕೊಳ್ಳಬೇಕು.


ವೇಳೆ ವಿಷಯ
ಬೆಳಿಗ್ಗೆ 4 ಗಂಟೆಯಿಂದ 4:30ರವರೆಗೆ ಬೆಳಿಗ್ಗೆ ಎದ್ದ ಕೂಡಲೇ ಮುಖವನ್ನು ಚೆನ್ನಾಗಿ ತೊಳೆದುಕೊಂಡು ಒಂದು ಕಪ್ ನೀರು ಮತ್ತು ಟೀಯನ್ನು ಕುಡಿಯಬೇಕು.
ಬೆಳಿಗ್ಗೆ 4:30 ರಿಂದ 4:45ರವರೆಗೆ ಬೆಡ್‌ಶೀಟ್ ಮೇಲೆ ಕುಳಿತು ಧ್ಯಾನ ಮಾಡಬೇಕು.
ಬೆಳಿಗ್ಗೆ 4:45 ರಿಂದ 6ರವರೆಗೆ
  • ಸೋಮವಾರ ಮತ್ತು ಗುರುವಾರರಂದು ಕನ್ನಡ ವಿಷಯವನ್ನು ಓದಬೇಕು.
  • ಮಂಗಳವಾರ ಮತ್ತು ಶುಕ್ರವಾರ ಸಮಾಜ ವಿಜ್ಞಾನ ವಿಷಯವನ್ನು ಓದಬೇಕು.
  • ಬುಧವಾರ ಮತ್ತು ರವಿವಾರ ಹಿಂದಿ ವಿಷಯವನ್ನು ಓದಬೇಕು.
ಶನಿವಾರ ಮಾತ್ರ ಬೆಳಿಗ್ಗೆ 4:45 ರಿಂದ 6:00 ನಿಮಗೆ ಕಷ್ಟವಾದ ವಿಷಯವನ್ನು ಓದಬೇಕು.
ಬೆಳಿಗ್ಗೆ 6:05 ರಿಂದ 7 ರವರೆಗೆ
  • ಸೋಮವಾರ ಮತ್ತು ಗುರುವಾರರಂದು ಇಂಗ್ಲೀಷ್ ವಿಷಯವನ್ನು ಓದಬೇಕು.
  • ಮಂಗಳವಾರ ಮತ್ತು ಶುಕ್ರವಾರರಂದು ವಿಜ್ಞಾನ ವಿಷಯವನ್ನು ಓದಬೇಕು.
  • ಬುಧವಾರ ಮತ್ತು ಭಾನುವಾರರಂದು ಗಣಿತ ವಿಷಯವನ್ನು ಓದಬೇಕು.
ಬೆಳಿಗ್ಗೆ 7:05 ರಿಂದ ಸಂಜೆ 5:00 ಗಂಟೆವರೆಗೆ ಶಾಲೆಗೆ ರೆಡಿಯಾಗಿ, ಹೋಗಿ ಬರುವುದು, ಈ ಸಮಯದಲ್ಲಿ ನಿಮಗೆ ಸಮಯ ಸಿಕ್ಕರೆ ಬೆಳಿಗ್ಗೆ ಓದಿದ ವಿಷಯವನ್ನು ಓದಬೇಕು.
ಭಾನುವಾರ ಮಾತ್ರ: 
1) ಬೆಳಿಗ್ಗೆ 7:05 ರಿಂದ 8 ಗಂಟೆವರೆಗೆ
2) ಬೆಳಿಗ್ಗೆ 8:05 ರಿಂದ 10 ಗಂಟೆವರೆಗೆ
3) ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ
1) ಮಾಕ್ ಟೆಸ್ಟ್ ಪರೀಕ್ಷೆಗೆ ಈ ವಾರದಲ್ಲಿ ನಡೆದಿರುವ ಪಾಠಗಳ ಎಲ್ಲಾ ವಿಷಯಗಳನ್ನು ಕುರಿತು ನೀವೇ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿಕೊಳ್ಳಬೇಕು.
2) ಟೀ, ಟೀಫಿನ್‌ ಮತ್ತು ವಿಶ್ರಾಂತಿ ಮಾಡಬೇಕು.
3) ಮಾಕ್ ಟೆಸ್ಟ್ ಪರೀಕ್ಷೆಗಳನ್ನು ಬರೆಯುವುದು
ಶನಿವಾರ ಮಾತ್ರ: 
ಮಧ್ಯಾಹ್ನ 2:00 ರಿಂದ ಸಂಜೆ 5:00ರವರೆಗೆ
ಗಣಿತದ ಅಭ್ಯಾಸ ಮಾಡಬೇಕು ಅಥವಾ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು.
ಸಂಜೆ 5:00 ರಿಂದ 5:30 ರವರೆಗೆ ವಿಶ್ರಾಂತಿ ಪಡೆದು, ಏನಾದರೂ ತಿಂಡಿ ತಿನ್ನುವುದು.
ಸಂಜೆ 5:30 ರಿಂದ 7:00ರವರೆಗೆ ನಿಮ್ಮ ಶಾಲೆಯಲ್ಲಿ ಅಂದು ನಡೆದ ಪಾಠಗಳನ್ನು ಅಂದೇ ಅರ್ಥ ಮಾಡಿಕೊಂಡು ಓದಬೇಕು.
ರಾತ್ರಿ 7:00 ರಿಂದ 8:00 ರವರೆಗೆ ದಿನ ಓದಿದ್ದನ್ನು ಬರೆಯುವ ಅಭ್ಯಾಸ ಮಾಡಬೇಕು.
ರಾತ್ರಿ 8:00 ರಿಂದ 9:00 ರವರೆಗೆ ಊಟ ಮಾಡುವುದು ಮತ್ತು ವಿಶ್ರಾಂತಿ.
ರಾತ್ರಿ 9:00 ರಿಂದ 10:00 ರವರೆಗೆ ಶಾಲೆಯಲ್ಲಿ ತಿಳಿಸಿದ ಹೋಂ ವರ್ಕ್ ಮತ್ತು ಪ್ರಶ್ನೆ ಉತ್ತರಗಳನ್ನು ಬರೆಯುವುದು.
ರಾತ್ರಿ 10:00 ರಿಂದ ಬೆಳಿಗ್ಗೆ 4:00 ರವರೆಗೆ ನಿದ್ರೆ ಮಾಡುವುದು.

ಇದು ನಿಮ್ಮ ದಿನ ನಿತ್ಯದ ವೇಳಾಪಟ್ಟಿ ಇದರಲ್ಲಿ ಶನಿವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಹಾಗೂ ಭಾನುವಾರ ಮಾತ್ರ ಸ್ವಲ್ಪ ಬದಲಾವಣೆ ಇರುತ್ತದೆ. ಇದನ್ನು ಪ್ರತಿಯೊಬ್ಬರು ಪಾಲಿಸಿದರೆ 10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಉತ್ತೀರ್ಣವಾಗುವುದು 100% ಖಚಿತ. ಇದು ನನಗೆ ಕಷ್ಟ ಎಂದು ತಿಳಿದರೆ, ನಿಮಗೆ ತಿಳಿದ ಹಾಗೆ ಕಠಿಣ ಪರಿಶ್ರಮ ಇಲ್ಲದೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲುವುದು ಸುಲಭವಲ್ಲ. ನಿಮ್ಮಲ್ಲಿರುವ ಸೋಮಾರಿತನವನ್ನು ಬಿಟ್ಟು ಈ ವೇಳಾಪಟ್ಟಿಯ ಪ್ರಕಾರ ಅಭ್ಯಾಸ ಮಾಡಿ ನಿಮ್ಮ ಗೆಲುವನ್ನು ಸಾಧಿಸಿ.

ಈ ವೇಳಾಪಟ್ಟಿ ನಿಮಗೆ ಇಷ್ಟವಾದರೆ, ನಿಮ್ಮ ಸಹಪಾಠಿಗಳೊಂದಿಗೆ ಕೂಡ ಇದನ್ನು ಹಂಚಿಕೊಳ್ಳಿ.
Post a Comment (0)
Previous Post Next Post