ಇದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು, ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಮರುಹೊಂದಾಣಿಕೆ ಮಾಡಿಕೊಂಡಿರುವುದರಿಂದ ಅನುಷ್ಠಾನ ಹಾಗೂ ಅನುಪಾಲನೆಗಾಗಿ ಎಲ್ಲಾ ಹಂತದ ಭಾಗೀದಾರರು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ.
ಉಪನಿರ್ದೇಶಕರು (ಅಭಿವೃದ್ಧಿ) ರವರ ಜವಾಬ್ದಾರಿಗಳು
- ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅನುಷ್ಠಾನ ಹಾಗೂ ಅನುಪಾಲನೆ ಮಾಡಲು ಡಯಟ್ ಹಂತದಲ್ಲಿರುವ ಒಬ್ಬ ಹಿರಿಯ ಉಪನ್ಯಾಸಕರನ್ನು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ನೋಡಲ್ ಅಧಿಕಾರಿಯಾಗಿ ನೇಮಿಸುವುದು.
- ಸಂಪನ್ಮೂಲ ಸಾಹಿತ್ಯದ ಬಳಕೆ ಹಾಗೂ ಕಾರ್ಯಕ್ರಮದ ಅನುಷ್ಠಾನ ಮಾಡಲು ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ರಾಜ್ಯ ಹಂತಕ್ಕೆ ತರಬೇತಿಗಾಗಿ ನಿಯೋಜಿಸುವುದು.
- ರಾಜ್ಯ ಹಂತದಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳ ಸಹಾಯದೊಂದಿಗೆ ಜಿಲ್ಲಾ ಹಂತದಲ್ಲಿ ಕಲಿಕಾ ಚೇತರಿಕೆ - ಕಾರ್ಯಕ್ರಮದ ತರಬೇತಿಯನ್ನು ತಾಲ್ಲೂಕು ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವುದು.
- ಕಲಿಕಾ ಚೇತರಿಕ ಕಾರ್ಯಕ್ರಮದ ಮಾಹೇವಾರು ಪ್ರಗತಿ ಪರಿಶೀಲನೆ ಸಭೆಯನ್ನು ಉಪನಿರ್ದೇಶಕರು (ಆಡಳಿತ) ಇವರ ಸಮನ್ವಯದೊಂದಿಗೆ ನಡೆಸಿ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುವುದು.
- ಕಲಿಕೆಯನ್ನು ದೃಢೀಕರಿಸಲು ಕಾರ್ಯಕ್ರಮದ ಆರಂಭ, ಮಧ್ಯಂತರ, ಅಂತ್ಯದ ವೇಳೆಯಲ್ಲಿ ಆಳಶೋಧಾ ಅಧ್ಯಯನ ನಡೆಸುವುದು.
- ಜಿಲ್ಲಾ ಪಂತದಲ್ಲಿ ಕಲಿಕ ಚೇತರಿಕೆ ಕಾರ್ಯಕ್ರಮದ ಉತ್ತಮ ಅಭ್ಯಾಸಗಳ ಹಂಚಿಕೆಗೆ ವೇದಿಕೆಯನ್ನು ಕಲ್ಪಿಸುವುದು (ವರ್ಷಕ್ಕೆ ಕನಿಷ್ಠ ಎರಡು ಬಾರಿ).
- ಕಾಲ ಕಾಲಕ್ಕೆ ಕಾರ್ಯಕ್ರಮದ ಉತ್ತಮ ಅನುಷ್ಠಾನಕ್ಕೆ ಅಗತ್ಯ ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು.
ಉಪನಿರ್ದೇಶಕರು (ಆಡಳಿತ) ರವರ ಜವಾಬ್ದಾರಿಗಳು
- ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅನುಸ್ಥಾನ ಹಾಗೂ ಅನುಪಾಲನೆ ಮಾಡಲು ವಿಷಯ ಪರಿವೀಕ್ಷಕರನ್ನು ವಿಷಯವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
- ಶಿಕ್ಷಣಾಧಿಕಾರಿಗಳು ಹಾಗೂ ಡಿ.ವೈ.ಪಿ.ಸಿ-1 ಮತ್ತು 2 ಹಾಗೂ ಎ.ಪಿ.ಸಿ.ಒ-1 ಮತ್ತು 2 ಇವರನ್ನು ಕಾರ್ಯಕ್ರಮದ ಅನುಷ್ಠಾನ ಹಾಗೂ ಅನುಪಾಲನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮ ವಹಿಸುವುದು.
- ಡಯಟ್ ಹಂತದಲ್ಲಿ ನಡೆಯುವ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪಾಲ್ಗೊಂಡು ಶಾಲಾ ಹಂತದಲ್ಲಿ ತಾವು ಕಂಡ ಅನುಭವಗಳನ್ನು ಹಂಚಿಕೊಳ್ಳುವುದು.
- ತರಬೇತಿಗೆ ಶಿಕ್ಷಕರನ್ನು ನಿಯೋಜಿಸಲು ಸಕಾಲದಲ್ಲಿ ಅಗತ್ಯ ಕ್ರಮವಹಿಸುವುದು.
- ತರಬೇತಿಯ ಪ್ರತಿಯನ್ನು ಕಾಲಕಾಲಕ್ಕೆ ಅನುಪಾಲನೆ ಮಾಡಿ ನಿಯೋಜಿತ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವದು.
- ಕಾಲ ಕಾಲಕ್ಕೆ ಕಾರ್ಯಕ್ರಮದ ಉತ್ತಮ ಅನುಷ್ಠಾನಕ್ಕೆ ಅಗತ್ಯ ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು.
ತಾಲ್ಲೂಕು ಹಂತದ ಜವಾಬ್ದಾರಿಗಳು
- ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆ, ಸಂಪನ್ಮೂಲಗಳ ಪರಿಚಯ ಮತ್ತು ಅನುಷ್ಠಾನದ ಕುರಿತು ಅನುಷ್ಠಾನ ಅಧಿಕಾರಿಗಳಿಗೆ ತರಬೇತಿಯನ್ನು ನೀಡುವರು. ( ಬಿ.ಆರ್.ಪಿ, ಇ.ಸಿ.ಒ., ಸಿ.ಆರ್.ಪಿ., ಬಿ.ಐ.ಇ.ಆರ್.ಟಿ.).
- ಜಿಲ್ಲಾ ಹಂತದಲ್ಲಿ ನಡೆಯುವ ಸಂಪನ್ಮೂಲ ವ್ಯಕ್ತಿಗಳ ತರಬೇತಿಗೆ ಸೂಕ್ತ ವ್ಯಕ್ತಿಗಳನ್ನು (ಶಿಕ್ಷಕರು ಅಥವಾ ಅನುಷ್ಠಾನಾಧಿಕಾರಿಗಳು) ಗುರುತಿಸಿ ನಿಯೋಚಿಸುವುದು.
- ಜಿಲ್ಲಾ ಹಂತದಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿಂದ ತನ್ನ ವ್ಯಾಪ್ತಿ ಶಿಕ್ಷಕರಿಗೆ ತರಬೇತಿಯನ್ನು ಆಯೋಚಿಸುವುದು.
- ಪ್ರತಿ ತಿಂಗಳು ಸಮೂಹ ಸಂಪನ್ಮೂಲ ಸಭೆಗಳನ್ನು ( ಕ್ಲಸ್ಟರ್ ಸಮಾಲೋಚನ ಸಭೆ ) ಆಯೋಜಿಸಿ ಕಲಿಕಾ ಚತರಿಕೆ ಕಾರ್ಯಕ್ರಮದ ಪ್ರಗತಿ ಮತ್ತು ಅನುಭವ ಹಂಚಿಕೆಗೆ ಅವಕಾಶ ನೀಡುವುದು ಹಾಗೂ ಉತ್ತರ ಅಭ್ಯಾಗಳ ಬಗ್ಗೆ ವಿವರವಾದ ವರದಿಯನ್ನು ಸಂಬಂಧಿಸಿದ ಡಯಟ್‌ಗೆ ಸಲ್ಲಿಸುವುದು.
- ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕಿಸಿ ಸೂಕ್ತ ಹಿಮ್ಮಾಹಿತಿಯನ್ನು ಶಾಲಾ ಹಂತಕ್ಕೆ ಒದಗಿಸುವುದು
- ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ ಕಾಲಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಕಾರ್ಯಕ್ರಮದ ಅನುಪಾಲನೆ ಮಾಡುವುದು.
- ರಾಜ್ಯ ದಂತದಿಂದ ವಿತರಣೆಯಾಗುವ ಸಂಪನ್ಮೂಲ ಸಾಹಿತ್ಯಗಳು ಪ್ರತಿ ಶಾಲೆಗೆ ತಲುಪಿರುವ ಬಗ್ಗೆ ದೃಢೀಕರಣ ಮಾಡಿಕೊಳ್ಳುವುದು ಹಾಗೂ ಅವುಗಳ ಬಳಕೆಯ ಬಗ್ಗೆ ಅನುಪಾಲನೆ ಮಾಡುವುದು.
ಶಾಲಾ ಹಂತದ ಜವಾಬ್ದಾರಿಗಳು
- ಶಾಲೆಯ ಎಲ್ಲಾ ಭಾಗೀದಾರರಿಗೆ ಕಲಿಕಾ ಚೇತರಿಕ ಕಾರ್ಯಕ್ರಮದ ಮಹತ್ವದ ಕುರಿತು ಅರಿವು ಮೂಡಿಸುವುದು. (ಜೋಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಸ್ಥಳೀಯ ಜನ ಪ್ರತಿನಿಧಿಗಳು).
- ಕಾರ್ಯಕ್ರಮ ಹಾಗೂ ಸಂಪನ್ಮೂಲಗಳ ಪರಿಚಯಕ್ಕಾಗಿ ಆಯೋಜಿಸಿದ ತರಬೇತಿಯಲ್ಲಿ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸುವುದು.
- ಕಲಿಕಾ ಚೇತರಿಕೆಗಾಗಿ ನೀಡಿದ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ವಿದ್ಯಾರ್ಥಿಗಳ ಕಲಿಕೆಯನ್ನು ದೃಢೀಕರಿಸುವುದು ಹಾಗೂ ಪ್ರತಿವಾರ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ಶಾಲಾ ಮಟ್ಟದಲ್ಲಿ ಹಮ್ಮಿಕೊಳ್ಳುವುದು.
- ನೀಡಲಾದ ಸಂಪನ್ಮೂಲಗಳ ಹೊರತಾಗಿ ಕಲಿಕಾ ಚೇತರಿಕೆಗೆ ಅಗತ್ಯವಿರುವ ಇತರೆ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವದು.
- ಮೇಲಿನ ಎಲ್ಲಾ ಅಂಶಗಳನ್ನು ಮನನ ಮಾಡಿಕೊಂಡು ಎಲ್ಲಾ ಹಂತದ ಅಧಿಕಾರಿಗಳು, ಅನುಷ್ಠಾನಾಧಿಕಾರಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದ ಆಶಯವನ್ನು ಈಡೇರಿಸುವುದು.