ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ "ಗೃಹ ಜ್ಯೋತಿ" ಯೋಜನೆಯಡಿಯಲ್ಲಿ ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ದಿನಾಂಕ: 18-06-2023 ರಿಂದ ಅರ್ಹ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಗ್ರಾಹಕರು ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್: http://sevasindhugs.karnataka.gov.in/ ಗೆ ಭೇಟಿ ನೀಡಿ ಅರ್ಜಿ ಅಲ್ಲಿಸಬಹುದಾಗಿದೆ.
"ಗೃಹ ಜ್ಯೋತಿ" ಯೋಜನೆಯ ಸದುಪಯೋಗ ಪಡೆಯಲು ಗ್ರಾಹಕರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಿ.
ಕರ್ನಾಟಕ ಸರ್ಕಾರದ "ಗೃಹ ಜ್ಯೋತಿ" ಯೋಜನೆಗೆ ಅರ್ಜಿ ಸಲ್ಲಿಸುವ ಹಂತಗಳು/ವಿಧಾನ:
➤ ಹಂತ 1:
ಮೊದಲು ಈ ಕೆಳಗೆ ನೀಡಿದ ಲಿಂಕ್ ಬಳಸಿ ಅಗತ್ಯ ಮಾಹಿತಿಯನ್ನು ತುಂಬಿ ನೋಂದಣಿ ಮಾಡಿಕೊಳ್ಳಿ. ಕೆಲವೊಂದು ಸಲ ಸರ್ವರ್ ನ ತಾಂತ್ರಿಕ ತೊಂದರೆಯಿಂದಾಗಿ ಪೋರ್ಟಲ್ ತೆರೆದುಕೊಳ್ಳದಿದ್ದರೆ ಮತ್ತೊಮ್ಮೆ ಪ್ರಯತ್ನಿಸಿ ನೋಂದಣಿ ಮಾಡಿಕೊಳ್ಳಿ.
STEP 1 |
➤ ಹಂತ 2:
ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿ ನಮೂದಿಸಿರುವ ಅಕೌಂಟ್ ಐಡಿ/ಆರ್. ಆರ್. ನಂಬರ್ ತುಂಬಿ ಎಂಟರ್ ಪ್ರೆಸ್ ಮಾಡಿ. ಅಕೌಂಟ್ ಸಂಬಂಧಿಸಿದ ಉಳಿದ ಮಾಹಿತಿಯನ್ನು ತನ್ನಿಂದ ತಾನಾಗಿಯೇ ಭರ್ತಿಯಾಗಲಿದೆ.
STEP 2 |
➤ ಹಂತ 3:
ನಂತರ ನೀವು ಮನೆಯ ಮಾಲೀಕರೊ, ಬಾಡಿಗೆದಾರರೋ ಅಥವಾ ಕುಟುಂಬ ಸದಸ್ಯ ಎಂಬುದನ್ನು ಆಯ್ಕೆ ಮಾಡಿ.
STEP 3 |
➤ ಹಂತ 4:
ನಿಮ್ಮ ಆಧಾರ್ ನಂಬರ್ ನ್ನು ಭಾರ್ತಿ ಮಾಡಿ (ಬಾಡಿಗೆದಾರರಾಗಿದ್ದಲ್ಲಿ ಬಾಡಿಗೆದಾರರ ಆಧಾರ್ ನಂಬರ್ ತುಂಬಿ).
STEP 4 |
➤ ಹಂತ 5:
ಆಧಾರ್ ನಂಬರ್ ತುಂಬಿದ ನಂತರ, ಆಧಾರನಲ್ಲಿರುವ ಮಾಹಿತಿಯನ್ನು ತನ್ನಿಂದ ತಾನಾಗಿಯೇ ಎಲ್ಲ ವಿವರಗಳು ತೆರೆದುಕೊಳ್ಳಲಿವೆ. ಅದನ್ನು ಒಂದು ಸಲ ಪರಿಶೀಲಿಸಿ ಮುಂದುವರೆಯಿರಿ.
STEP 5 |
➤ ಹಂತ 6:
ನಿಮ್ಮ ಮೊಬೈಲ್ ನಂಬರ್ ಭರ್ತಿ ಮಾಡಿ "ಘೋಷಣೆ" ಯನ್ನು ಓದಿಕೊಂಡು "I Agree" ಮೇಲೆ ಕ್ಲಿಕ್ ಮಾಡಿ.
STEP 6 |
➤ ಹಂತ 7:
ನಂತರ ಒಟಿಪಿ ಪರದೆ ತೆರೆದುಕೊಳ್ಳಲಿದೆ. ನಿಮ್ಮ ಮೊಬೈಲ್ ಗೆ ಬಂಡ ಒಟಿಪಿ ಯನ್ನು ಅಲ್ಲಿ ಹಾಕಿ "VALIDATE" ಮೇಲೆ ಕ್ಲಿಕ್ ಮಾಡಿ.
STEP 7 |
➤ ಹಂತ 8:
ನಂತರ ಅಲ್ಲಿ ಕಾಣುವ "CAPTCHA" ಹಾಕಿ "SUBMIT" ಬಟನ್ ಮೇಲೆ ಕ್ಲಿಕ್ ಮಾಡಿ.
STEP 8 |
➤ ಹಂತ 9:
"SUBMIT" ಬಟನ್ ಕ್ಲಿಕ್ ಮಾಡಿದ ನಂತರ ಸ್ವೀಕೃತಿ ಪ್ರತಿ ಜನರೇಟ್ ಆಗಲಿದೆ. ಆ ಸ್ವೀಕೃತಿಯನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳಿ.
STEP 9 |
ಈ ರೀತಿ ಮೇಲಿನ ಹಂತಗಳನ್ನು ಅನುಸರಿಸಿ "ಗೃಹ ಜ್ಯೋತಿ" ಯೋಜನೆಗ ಅರ್ಜಿ ಸಲ್ಲಿಸಿ.