ಶಿಕ್ಷಕರಿಗಾಗಿ ತೆರಿಗೆ ಉಳಿತಾಯದ ಮಾರ್ಗಗಳು 2024-25

ಈ ವರ್ಷದ ತೆರಿಗೆ ವಿಚಾರವಾಗಿ ಶಿಕ್ಷಕರು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಸುಮಾರು 95% ಶಿಕ್ಷಕರು ಈ ವರ್ಷ ತೆರಿಗೆಗೆ ಒಳಪಡುವ ಸಾಧ್ಯತೆಯಿದೆ. ಏಕೆಂದರೆ, ಏಳನೇ ವೇತನ ಆಯೋಗದ ಪ್ರಕಾರ ವೇತನ ಪಡೆಯುತ್ತಿರುವುದು ಮತ್ತು ವಾರ್ಷಿಕ ಬಡ್ಡಿ ಹಾಗೂ ಕಾಲಮಿತಿ ಬಡ್ಡಿ ಪಡೆದಿರುವುದರಿಂದ ತೆರಿಗೆಯನ್ನು ಭರಿಸಬೇಕಾಗುತ್ತದೆ.

ಶಿಕ್ಷಕರಿಗಾಗಿ ತೆರಿಗೆ ಉಳಿತಾಯದ ಮಾರ್ಗಗಳು 2024-25



ಕಳೆದ ವರ್ಷದಂತೆ ಈ ವರ್ಷವೂ ಎರಡು ರೀತಿಯ ತೆರಿಗೆ ಲೆಕ್ಕಾಚಾರಗಳಿವೆ: ಹಳೆ ತೆರಿಗೆ ಪದ್ಧತಿ (Old Regime) ಮತ್ತು ಹೊಸ ತೆರಿಗೆ ಪದ್ಧತಿ (New Regime).

ಹೊಸ ತೆರಿಗೆ ಪದ್ಧತಿ (New Tax Regime):

  • ಈ ತೆರಿಗೆ ಪದ್ಧತಿಯಲ್ಲಿ ಯಾವುದೇ ಉಳಿತಾಯ ಮಾಡಲು ಬರುವುದಿಲ್ಲ.
  • ಒಟ್ಟು ವೇತನ 7 ಲಕ್ಷ ಮತ್ತು 75,000 ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿ 7,75,000 ರೂ. ಆದಾಯದವರೆಗೆ ತೆರಿಗೆ ಇರುವುದಿಲ್ಲ.
7,75,000 ರೂ. ಗಿಂತ ಅಧಿಕ ವೇತನ ಪಡೆಯುತ್ತಿದ್ದರೆ ಈ ಕೆಳಗಿನಂತೆ ಆದಾಯ ತೆರಿಗೆಗೆ ಒಳಪಡುತ್ತೀರಿ:
  •  0-3 ಲಕ್ಷಕ್ಕೆ ತೆರಿಗೆ ಇಲ್ಲ.
  •  3-6 ಲಕ್ಷಕ್ಕೆ 5%, ಅಂದರೆ 15000 ರೂ. ತೆರಿಗೆ ಭರಿಸಬೇಕು.
  •  6-9 ಲಕ್ಷಕ್ಕೆ 15000+10% (30000) = 45000 ರೂ. ತೆರಿಗೆ ಭರಿಸಬೇಕು
  •  9-12 ಲಕ್ಷಕ್ಕೆ 45000+ 15% ತೆರಿಗೆ (45000) = 90000 ರೂ. ತೆರಿಗೆ ಭರಿಸಬೇಕು.
  •  12-15 ಲಕ್ಷಕ್ಕೆ 90000+20% ತೆರಿಗೆ (60000) = 150000 ರೂ. ತೆರಿಗೆ ಭರಿಸಬೇಕು.
  •  15 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದರೆ 30% ತೆರಿಗೆ ಅನ್ವಯಿಸುತ್ತದೆ.

ಹಳೆ ತೆರಿಗೆ ಪದ್ಧತಿ (Old Tax Regime):

ಶಿಕ್ಷಕ ಬಾಂಧವರ ಆದಾಯ ತೆರಿಗೆ ಲೆಕ್ಕಾಚಾರ ಸರಳವಾಗಿಸಲು ಕೆಲವು ಸೂಚನೆಗಳು:
  • ಇದರಲ್ಲಿ 5 ಲಕ್ಷದ ಒಳಗಿನ ಆದಾಯಕ್ಕೆ ತೆರಿಗೆ ಬರುವುದಿಲ್ಲ.
  • 5-10 ಲಕ್ಷದವರೆಗಿನ ಆದಾಯಕ್ಕೆ 12,500 + 20% (1,00,000) = 1,12,500 ರೂ. ತೆರಿಗೆ ಭರಿಸಬೇಕು.
  • 10 ಲಕ್ಷ ಮೇಲ್ಪಟ್ಟು ಆದಾಯಕ್ಕೆ 1,12,500 + 30% ರಷ್ಟು ಕಟ್ಟಬೇಕಾಗುತ್ತದೆ.

ಹಳೆ ಪದ್ಧತಿಯಲ್ಲಿ ಉಳಿತಾಯ ಮಾಡಲು ಈ ಕೆಳಗಿನ ಅವಕಾಶಗಳಿವೆ:

👉 80C: (ಈಗಾಗಲೇ ವೇತನದಲ್ಲಿ ಕಡಿತಗಳ ಒಟ್ಟು ಮೊತ್ತ 1,50,000 ರೂ. ಮೀರಿದವರಿಗೆ ಈ ಕೆಳಗಿನವುಗಳು ಅನ್ವಯಿಸುವುದಿಲ್ಲ)

    1.  ಮಕ್ಕಳ ಟ್ಯೂಷನ್ ಫೀ ರಸೀದಿ
    2.  PLI ತುಂಬಿದ ದಾಖಲೆ
    3.  ಕೈಯಿಂದ ತುಂಬುವ LIC ಕಂತು
    4.  NSC
    5.  ಸುಕನ್ಯಾ ಸಮೃದ್ಧಿ
    6.  ವಾಪಸ್ ತುಂಬಿದ ಗೃಹ ಸಾಲದ ಅಸಲು
    7.  ಇತರೆ

80C ಅಡಿ ರೂ. 1,50,000 ಮೀರಿದವರಿಗೆ ನೇರವಾಗಿ ಆದಾಯದಲ್ಲಿ ಕಡಿತಕ್ಕೆ ಇರುವ ಅವಕಾಶಗಳು:
  • ಗೃಹ ಸಾಲದ ಬಡ್ಡಿ ತುಂಬುತ್ತಿರುವವರು ಬ್ಯಾಂಕ್‌ನಿಂದ 'Provisional Interest Certificate' ಕೇಳಿ ಪಡೆದುಕೊಳ್ಳಿರಿ (ಸ್ಟೇಟ್‌ಮೆಂಟ್ ಕೇಳಿ ತರಬೇಡಿರಿ).

👉 80 D: ಆರೋಗ್ಯ ವಿಮೆ ಸ್ವಂತ ಮತ್ತು ಅವಲಂಬಿತರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಿದರೆ, ತುಂಬಿದ ಪ್ರೀಮಿಯಂಗೆ ಗರಿಷ್ಠ 25,000 ರೂ. ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ.

👉 80 DD: ವಿಕಲಚೇತನ ಅವಲಂಬಿತರ ವೈದ್ಯಕೀಯ ವೆಚ್ಚ, ಅವಲಂಬಿತರು ವಿಕಲಚೇತನರಾಗಿದ್ದು ಅವರ ವೈಕಲ್ಯ ಪ್ರಮಾಣ 40-79 ಇದ್ದರೆ ಗರಿಷ್ಠ ರೂ. 75,000 ಅಥವಾ 80% ಕ್ಕಿಂತ ಹೆಚ್ಚಿದ್ದರೆ ಗರಿಷ್ಠ ರೂ. 1,25,000 ಆದಾಯದಿಂದ ಕಳೆಯಲ್ಪಡುತ್ತದೆ.

👉 80 DDB: ನಿರ್ದಿಷ್ಟ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ವಿನಾಯಿತಿ. ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ದಿಷ್ಟ ರೋಗಗಳಿಗೆ ಮಾಡುವ ವೆಚ್ಚಕ್ಕೆ ವಿನಾಯಿತಿ ನೀಡುತ್ತದೆ. ತಾವು ಅಥವಾ ತಮ್ಮ ಅವಲಂಬಿತರು ಅಂತಹ ರೋಗಗಳಿಗೆ ಚಿಕಿತ್ಸೆ ಪಡೆದಿದ್ದರೆ ರಸೀದಿಗಳು ಹಾಗು MD ಅಥವಾ MS ಪದವಿ ಹೊಂದಿದ ವೈದ್ಯರಿಂದ '10-I' ಫಾರ್ಮ್ ಪಡೆದು ಸಲ್ಲಿಸಬೇಕು. ಆ ನಿರ್ದಿಷ್ಟ ರೋಗಗಳ ಪಟ್ಟಿ ಈ ಕೆಳಗಿನಂತಿವೆ. ಇದನ್ನು ಸಕ್ಷಮ ವೈದ್ಯರೇ ನಿರ್ಧರಿಸಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಈ ಕೆಳಗಿನ ಚಿಕಿತ್ಸೆಗೆ ಮಾತ್ರ:
  • Neurological Diseases where the disability level has been certified to be of 40% and above,—
  • Dementia
  • Dystonia Musculorum Deformans
  • Motor Neuron Disease
  • Ataxia
  • Chorea
  • Hemiballismus
  • Aphasia
  • Parkinsons Disease
  • Malignant Cancers
  • Full Blown Acquired Immuno-Deficiency Syndrome (AIDS)
  • Chronic Renal failure
  • Hematological disorders :
  • Hemophilia
  • Thalassaemia

👉 80 CCD 1(B): NPS ಗೆ ಹೆಚ್ಚುವರಿಯಾಗಿ ಸಂದಾಯ ಮಾಡಿದ ಮೊತ್ತ. ವೇತನದಲ್ಲಿ ಕಡಿತವಾಗುವ ಮೊತ್ತವಲ್ಲದೆ NPS ಗೆ ಹೆಚ್ಚುವರಿಯಾಗಿ ಹಣ ತುಂಬಿದರೆ ಗರಿಷ್ಠ ರೂ. 50,000 ವರೆಗೆ ವಿನಾಯಿತಿ ಇದೆ.

👉 80 E: ಶಿಕ್ಷಣ ಸಾಲದ ಬಡ್ಡಿ. ನೌಕರನು ತಾನು ಹಾಗು ಅವಲಂಬಿತರ ಶಿಕ್ಷಣ ಸಾಲದ ಬಡ್ಡಿ ತುಂಬಿದರೆ ಅದಕ್ಕೆ ವಿನಾಯಿತಿ ಸಿಗುತ್ತದೆ.

You Might Like:
👉 80 G: ದೇಣಿಗೆ/ದಾನಕ್ಕೆ ವಿನಾಯಿತಿ. ಆದಾಯ ಇಲಾಖೆಯಲ್ಲಿ 80G ಅಡಿ ನೋಂದಣಿ ಮಾಡಿಕೊಂಡು ಚಾಲ್ತಿ ಪ್ರಮಾಣ ಪತ್ರ ಹೊಂದಿರುವ ಟ್ರಸ್ಟ್/ಸಂಸ್ಥೆಗಳಿಗೆ ದಾನ ನೀಡಿದರೆ ಗರಿಷ್ಠ ಒಟ್ಟು ವೇತನದ 10% ಕ್ಕೆ ವಿನಾಯಿತಿ ಸಿಗುತ್ತದೆ. ಸರ್ಕಾರೇತರ ಟ್ರಸ್ಟ್‌ಗಳಿಗೆ ನೀಡಿರುವ ದೇಣಿಗೆಯ 50% ಮಾತ್ರ ನಮ್ಮ ಆದಾಯದಿಂದ ಕಳೆಯಲ್ಪಡುತ್ತದೆ. ಸರ್ಕಾರಿ ನಿಧಿಗಳಿಗಲ್ಲದ ದೇಣಿಗೆಯ 100% ಮಾತ್ರ ನಮ್ಮ ಆದಾಯದಿಂದ ಕಳೆಯಲ್ಪಡುತ್ತದೆ. ರೂ. 2000 ಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಚೆಕ್/ಡಿಡಿ/NEFT/RTGS ವಿಧಾನದ ಮುಖಾಂತರವೇ ಹಣ ಸಂದಾಯ ಮಾಡಿರಬೇಕಾಗುತ್ತದೆ.

👉 80 U: ಸ್ವತಃ ನೌಕರನೇ ವಿಕಲಚೇತನರಾಗಿದ್ದರೆ ಪ್ರಮಾಣ ಪತ್ರ ಪೂರೈಸಬೇಕು.

👉 HRA: ಮನೆ ಬಾಡಿಗೆ ತೆಗೆದುಕೊಳ್ಳಬಹುದು. ಆದರೆ ಈ ವರ್ಷ ಹಳೆ ಪದ್ಧತಿಯಲ್ಲಿ ಹೆಚ್ಚು ತೆರಿಗೆ ಬರುವುದರಿಂದ ಹೆಚ್ಚಿನವರಿಗೆ ಮನೆ ಬಾಡಿಗೆ (HRA) ಉಪಯೋಗವಾಗುವುದಿಲ್ಲ.

ಈ ಮಾಹಿತಿಯು ಶಿಕ್ಷಕರಿಗೆ ಈ ವರ್ಷದ ತೆರಿಗೆ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಲು ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ತೆರಿಗೆ ಸಲಹೆಗಾರರನ್ನು ಸಂಪರ್ಕಿಸುವುದು ಉತ್ತಮ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಪಿಡಿಎಫ್ ಫೈಲ್ ಡೌನ್ಲೋಡ್ ಮಾಡಿಕೊಳ್ಳಿ:


Post a Comment (0)
Previous Post Next Post